Friday, April 5, 2013

ಬಾರಯ್ಯ ಭಾಸ್ಕರ



ಬಾರಯ್ಯ ಭಾಸ್ಕರ
ಜಗ ಬೆಳಗೊ ದಿನಕರ
ಇರುಳಿನ ತಂಪಿನಲಿ ಬೆಚ್ಚಗೆ
ಮಲಗಿದ್ದ ಜಡತೆಯನು
ಒಡೆದೋಡಿಸು ಬಾರೋ,
ಕತ್ತಲ ಸರಿಸಿ, ಬೆಳಕನು ಹರಿಸಿ,
ನಿನ್ನೆ ಮೊನ್ನೆಯ ನೋವನು
ನೀ ಮರೆಸು ಬಾರೋ
ಕೆಂಪಾದ ನಿನ್ನ ಹೊಂಗಿರಣದಿಂದ
ನರನಾಡಿಯಲ್ಲಿ ಹೊಸಚೈತನ್ಯ ತಾರೋ

ಸಂಜೆಯಾಗುವವರೆಗೂ
ಈ ಉತ್ಸಾಹ ಬತ್ತದಿರಲಿ.
ನನ್ನ ಬೆವರ ಹರಿಸಿ,
ಮಾಡಿದ ದುಡಿಮೆಯಲಿ,
ಈ ಚೈತನ್ಯ ನಲುಗದಿರಲಿ.
ನಾಳಿನ ನಿನ್ನ ದರುಷನಕೆ,
ಕಾದಿವೇ ಈ ಕಣ್ಣುಗಳು.
ಆ ಕನಸಿನಲೇ ನಾ
ಕಳೆಯುತಿರುವೆ ಇರುಳು.
ಬಾರಯ್ಯ ಭಾಸ್ಕರ
ದಿನ ಬೆಳಗೋ ದಿನಕರ

7 comments:

  1. Perhaps this poem reminded my first poem which i'd written when i was studying in 9th std.. I gave the title as 'SURYA' to that poem and the same was published in school magazine..:-) Now i feel very sorry that i've lost track of my all poems and poetry :-(

    ReplyDelete
  2. ಮನಮೋಹಕ ಕವಿತೆ!
    ಸುಂದರ ವರ್ನಣನೆ!

    ReplyDelete
  3. ಸಂಜೆಯಾಗುವವರೆಗೂ
    ಈ ಉತ್ಸಾಹ ಬತ್ತದಿರಲಿ.
    ನನ್ನ ಬೆವರ ಹರಿಸಿ,
    ಮಾಡಿದ ದುಡಿಮೆಯಲಿ,
    ಈ ಚೈತನ್ಯ ನಲುಗದಿರಲಿ super

    ReplyDelete
  4. Thank U Prakash Srinivas, Ambika Bv

    ReplyDelete
  5. M.s. Krishna Murthy GeethaAugust 21, 2013 at 12:17 AM

    Ksamisi ill kavite post maduva hagilla. Idu sahityada charhe,vimarrhege misalada gumpu. Nima prakatane teravu golisbakagi koruthene

    ReplyDelete
  6. ಭಾಸ್ಕರ ಕವಿಗೆ ಬಹಳಷ್ಟು ಭಾವಗಳನ್ನು ನೀಡುವ ವ್ಯಕ್ತಿ, ಚೆನ್ನಾಗಿ ಉಪಯೋಗಿಸಿಕೊಂಡಿದ್ದೀರ. ಚೆನ್ನಾಗಿದೆ. ಹಾಗೆ ಬೇರೆಯವರ ಕವನಗಳನ್ನೂ ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ

    ReplyDelete